ಕಠಿಣವಾದ ಕೆಲಸ ಮಾಡುವುದಕ್ಕಿಂತ ಚುರುಕಾದ ಕೆಲಸ ಮಾಡಿ ಎಂಬುದು ಜನಜನಿತವಾದ ಮಾತು. ಆದರೆ ಅದು ಹೇಳಿದಷ್ಟು ಸುಲಭವಲ್ಲ ಎಂಬುದನ್ನು ನಾವು ತಿಳಿದಿದ್ದೇವೆ. ಈ ಕೆಳಗೆ ನೀಡಿರುವ ಎಂಟು ಅಂಶಗಳ ವೃತ್ತಿಪರ ಸಲಹೆಗಳನ್ನು ಅನುಸರಿಸಿದರೆ ನಾವು ಯಶಸ್ಸು ಕಾಣಬಹುದು. ಈ ಸಲಹೆಗಳನ್ನು ಹೊಸ ಉದ್ಯೋಗಕ್ಕಾಗಿ ಸೇರಬಯಸುವವರು, ಈಗಾಗಲೇ ವೃತ್ತಿಯಲ್ಲಿ ನಿರತರಾಗಿರುವವರು ಎಲ್ಲರೂ ಫಾಲೋ ಮಾಡಿ ತಮ್ಮ ಉದ್ಯೋಗದಲ್ಲಿ ಶಾಂತಿ ಮಂತ್ರ ಕಾಪಾಡಿಕೊಳ್ಳಿ.
ಹಲವು ಜನ ತಮ್ಮ ಅಹಂಕಾರದಿಂದ ತಾವು ನಡೆದು ಬಂದ ದಾರಿಯನ್ನು ಇತರರಿಗೆ ತಿಳಿಸುವುದಿಲ್ಲ. ಅಂತಹ ವ್ಯಕ್ತಿಯೊಡನೆ ಮಾತನಾಡಿದರೆ ನಮಗೆ ತುಂಬಾ ವಿಷಯಗಳು ತಿಳಿಯುತ್ತದೆ. ಅವರು ನಿಮಗೆ ಮುಖತಃ ಭೇಟಿ ಮಾಡಿ ಗೊತ್ತಿಲದೇ ಇದ್ದರೆ, ಅವರಿಗೆ ಕಾಫಿಯೊಂದಿಗೆ ಮಾತನಾಡುತ್ತ ನಿಮ್ಮ ಬಗ್ಗೆ ತಿಳಿಯುವುದಕ್ಕೆ ಸಮಯ ಕೊಡಿ ಎಂಬ ಮನವಿಯೊಂದಿಗೆ ಒಂದು ಮೇಲ್ ಕಳುಹಿಸಿ. ನಾನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಇದೆ ರೀತಿ ಮೂರು ಬಾರಿ ಮಾಡಿದ್ದೆ. ಸಾಮಾನ್ಯವಾಗಿ ಬ್ಯಾಂಕಿನ ಉನ್ನತ ಮಟ್ಟದ ಅಧಿಕಾರಿಗಳು ಉದಾರತೆಗಿಂತ ಅಹಂ ತುಂಬಿದ ವ್ಯಕ್ತಿಗಳು. ಅಂತಹ ವ್ಯಕ್ತಿಗಳಿಗೆ ತಮ್ಮ ಬಗ್ಗೆ ಹೇಳಿಕೊಳ್ಳುವುದಕ್ಕೆ ಕಾಯುತ್ತಿರುತ್ತಾರೆ. ನಾನು ಹೀಗೆ ಕೆಲವು ಬಾರಿ ಫೈನಾನ್ಸ್ ನಲ್ಲಿ ಕೆಲಸ ಮಾಡುವಾಗ ನನ್ನ ಬಗ್ಗೆ ಹೇಳಿಕೊಂಡಿದ್ದೇನೆ ನಂತರ ವೈದ್ಯಕೀಯ ವಿಭಾಗಕ್ಕೆ ಸೇರಿದೆ.