ಬುದ್ಧಿವಂತಿಕೆಯ ಅಂಶಕ್ಕಿಂತ ಪ್ರಾಯೋಗಿಕ ಬುದ್ಧಿವಂತಿಕೆಯು ಯಶಸ್ಸಿಗೆ ಹೆಚ್ಚು ಸಹಕಾರಿಯಾಗುತ್ತದೆ

Share

ಬುದ್ಧಿವಂತಿಕೆಯ ಅಂಶಕ್ಕಿಂತ ಪ್ರಾಯೋಗಿಕ ಬುದ್ಧಿವಂತಿಕೆಯು ಯಶಸ್ಸಿಗೆ ಹೆಚ್ಚು ಸಹಕಾರಿಯಾಗುತ್ತದೆ

ಯಾವುದೇ ಕೆಲಸ ಮಾಡಲು ಕನಿಷ್ಠ ಮಟ್ಟದ ಬುದ್ಧಿಮತ್ತೆ ಅಗತ್ಯವಾಗಿ ಬೇಕಾಗಿದೆ. ಆದರೆ ಅದೊಂದೇ ಯಶಸ್ಸಿನ ಸಾಧನವಲ್ಲ ಎಂಬುದು ಹಲವು ಬಾರಿ ನಿರೂಪಿತವಾಗಿದೆ. ಒಂದು ಸಂಶೋಧನೆಯ ಪ್ರಕಾರ ನಿಮ್ಮ ಐಕ್ಯೂ 125 ಕ್ಕಿಂತ ಜಾಸ್ತಿಯಿದ್ದರೆ ಯಾವುದೇ ಕೆಲಸವನ್ನು ಮಾಡಬಹುದು ಎಂದು ಹೇಳುತ್ತದೆ. ಆದರೆ ಯಾವುದೇ ವ್ಯಕ್ತಿಯ ಯಶಸ್ಸಿನ ಸೂತ್ರವು ಆ ವ್ಯಕ್ತಿಯ ಪ್ರಾಯೋಗಿಕ ಪರಿಕಲ್ಪನೆಯ ಮೇಲೆ ಅವಲಂಬಿವಾಗಿರುತ್ತದೆ ಎನ್ನವುದು ಹಲವಾರು ಸಂಶೋಧನೆಗಳಿಂದ ದೃಢಪಟ್ಟಿದೆ. ಮಾಲ್ಕಮ್ ಗ್ಲಾದ್ವೇಲ್ ಅವರ ಪ್ರಕಾರ ನಮ್ಮ ಜ್ಞಾನ ನಮಗೆ ಮಾತ್ರವಲ್ಲದೆ, ನಮ್ಮ ಪರಿಸ್ಥಿತಿಗಳನ್ನು ಅವಲೋಕಿಸಿ ಅದರಿಂದ ಹೊರಗೆ ಬರುವಂತೆ ಮಾಡಬೇಕು. ನೀವು ಎಲ್ಲರಿಗಿಂತ ಮುಂದಿರಬೇಕಾದರೆ ನಿಮ್ಮ ಯೋಜನೆಗೆ ನಿಮ್ಮ ಪ್ರಾಯೋಗಿಕ ಯೋಚನೆಯು ಸೇರಿ ಸರಿ ಹೊಂದಬೇಕು.

  • Share this post

Leave a Comment